ಪಂಚ (ಕರ್ಮ )-೩

4 0 0
                                    

ಸೂಚನೆ :
1) ಇದು ಮೂರನೇ ಭಾಗ ಆಗಿರುವುದರಿಂದ ಇಲ್ಲಿಯೇ ಇರುವ ಮೊದಲೆರಡು ಭಾಗ ಮೊದಲು ಓದಬೇಕಾಗಿ ವಿನಂತಿ.
2) ವಾಂತಿಯ ಬಗ್ಗೆ ಇಲ್ಲಿ ಮಾತನಾಡಿರುವುದರಿಂದ, ಈ ವಿಚಾರಗಳ ಬಗ್ಗೆಯ ಮಾತುಗಳು ಹಿಂಸೆ ಉಂಟುಮಾಡಿದಲ್ಲಿ, ಓದಬೇಕಾದರೆ ಹುಷಾರು.

ತುಪ್ಪ ಕುಡಿಯೋ ಪರಸಂಗ ಮುಗಿದ ದಿನವು, ನರ್ಸಮ್ಮ ಮತ್ತು ಡಾಕ್ಟ್ರು ಬಂದು,  "ಅನ್ವಿ ಅವರೇ, ನಾಳೆ  ಸಿಹಿ ತಿನ್ನಿ,  ಮುಖ ಕಟ್ಟಿದಂತೆ ಆದರೂ ಹೊಟ್ಟೆ ತುಂಬಾ ಸಿಹಿ ಮಾತ್ರವೇ ತಿನ್ನಬೇಕು, ಸಿಹಿ ಬಿಟ್ಟು ಇನ್ನೇನೂ ತಿನ್ನಲು ಅನುಮತಿ ಇಲ್ಲ. ನಾಳಿದ್ದು 'ವಮನ' ಇದೆ. ಅರ್ಥ ಆಯ್ತಾ?" ಎನ್ನೋದೇ?

'ಇದೇನಪ್ಪ ವಿಚಿತ್ರ? ಇಷ್ಟು ದಿನ ಹಸಿವಿನಿಂದ ಕಣ್ಣು ಕಣ್ಣು ಬಿಡುವಂತೆ ಮಾಡಿ, ನಾಳೆ ಅಷ್ಟೂ ದಿನದ ಕೋಟಾವನ್ನು ಒಂದೇ ದಿನದಲ್ಲಿ ತಿನ್ನು ಎನ್ನುತ್ತಿದ್ದಾರಲ್ಲ? ಚನ್ನಾಗಿ ಕೊಬ್ಬಿಸಿ ಇನ್ನೇನು ಮಾಡುತ್ತಾರೋ' ಎಂಬ ಯೋಚನೆ ಬಂದಿತು, ಅನ್ವಿಗೆ. ತನ್ನ ವಿಚಿತ್ರ ಯೋಚನಾ ಲಹರಿ ನೋಡಿ ನಗುವೂ ಬಂತು.

ಹೊಟ್ಟೆ ಹಸಿವಿಗಿಂತ ಹೊಟ್ಟೆ ಬಿರಿಯುವ ಹಾಗೆ ತಿನ್ನೋದು ವಾಸಿ, ಹೇಗಿದ್ದರೂ ಅನ್ವಿಗೆ ಸಿಹಿತಿಂಡಿಗಳು ಎಂದರೆ ಪ್ರಾಣ ಅಲ್ಲವೇ?...
ತಪ್ಪು !
......ಸಿಹಿಯ  ನರಕಕ್ಕೆ ಬಂದು ಬೀಳುವವಳಿದ್ದಳು, ನಮ್ಮ ಹುಡುಗಿ.

ಡಾಕ್ಟ್ರು ಏನೇನು ಹೇಳಬೇಕಿತ್ತೋ ಹೇಳಿ,  ಇವರ ಕೋಣೆಯೇ ಕೊನೆಯದಾದ್ದರಿಂದ ರೌಂಡ್ಸ್ ಮುಗಿಸಿ ಹಿಂದಿರುಗಿದರು. ಮನುಷ್ಯ ಸಂಘಕ್ಕೆ ಹಾತೊರೆಯುತ್ತಿದ್ದ ಅನ್ವಿ ಮತ್ತು ಅಕ್ಕನಿಗೆ,  ಹೆಚ್ಚೂ ಕಡಿಮೆ ತಮ್ಮದೇ ವಯಸ್ಸಿನ ನರ್ಸನ್ನು ಗೆಳತಿಯನ್ನಾಗಿ ಮಾಡಿಕೊಳ್ಳುವುದು ಕಷ್ಟವಾಗಲಿಲ್ಲ. ಅಂದು ನರ್ಸಮ್ಮನಿಗೆ ಜಾಸ್ತಿ ಕೆಲಸ ಇಲ್ಲದ್ದರಿಂದ ಸಮಯ ಕಳೆಯಲು ಮೂರೂ ಜನರೂ ಲೂಡೋ ಆಡಲು ತೊಡಗಿದರು.
ಒಂದೆರಡು ಸುತ್ತು ಆಡಿ ಅದೂ ಕೂಡಾ ಬೇಜಾರಾದ ನಂತರ, ಅನ್ವಿ ಮತ್ತು ಅಕ್ಕ ಸಿಹಿ ತಿನ್ನುವ ವಿಚಿತ್ರ ಏನಿದು? ಮತ್ತೇನೇನು ಕಾದಿದೆ? ಎಂದು ಬೆದರಿ ಬೆಂಡಾಗಿ ಕೇಳಲಾಗಿ ನರ್ಸಮ್ಮನು ಅದೇಕೆಂದು ವಿವರಿಸತೊಡಗಿದಳ್.

"ನಾನೂ ಕೂಡಾ ಇಲ್ಲಿ ಪಂಚಕರ್ಮ ಮಾಡಿಸಿಕೊಂಡಿದ್ದೆ. ಸಿಹಿ ತಿನ್ನಿಸೋದು, ಹೊಟ್ಟೆ ಪೂರ್ತಿ ಖಾಲಿ ಆಗಲಿ ಎಂದು",  ಎಂದು ಮತ್ತಿನೇನೇನೋ ಹೇಳಿದಳ್ ನರಸಮ್ಮ. ಅನ್ವಿಯ ತಲೆಗೆ ಆಯುರ್ವೇದದ ಪದಗಳು ಹೋಗಲಿಲ್ಲ.

"ನನಗೆ ಹಸಿವು ತಾಳಲು ಆಗಲೇ ಇಲ್ಲ! ಎಲ್ಲರ ಕಣ್ಣು ತಪ್ಪಿಸಿ ಕ್ಯಾಂಟೀನ್ನಲ್ಲಿ ಇಡ್ಲಿ ವಡೆ ತಿಂದು ಬಂದಿದ್ದೆ!" ಎಂದು ನರ್ಸಮ್ಮ ಬಾಯಿ ಬಿಟ್ಟಾಗ  ಸೊಂಪಾದ ನಗುವಿನ ಅಲೆ ಎದ್ದಿತು ಅವರ ಕೊಠಡಿಯಲ್ಲಿ.

Life: The stories Where stories live. Discover now